ಶ್ರೀಲೀಲಾ ಕನ್ನಡ ಚಿತ್ರರಂಗದ ನಟಿ. ಎ. ಪಿ. ಅರ್ಜುನ್ ನಿರ್ದೇಶನದ ೨೦೧೯ರ ಕಿಸ್ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣ ಆರಂಭಿಸಿದರು. ಮೊದಲ ಚಿತ್ರದಲ್ಲೇ ಗುರುತಿಸಿಕೊಂಡ ಇವರು ನಟನೆಯ ಜೊತೆಗೆ ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿಯೂ ಅಧ್ಯಯನ ನಡೆಸುತ್ತಿದ್ದಾರೆ. . == ವೈಯಕ್ತಿಕ ಜೀವನ == ಅಮೆರಿಕದ ಮಿಚಿಗನ್ ನಲ್ಲಿ, ಶುಭಕರ್ ರಾವ್ ಸುರಪನೇನಿ ಮತ್ತು ಸ್ವರ್ಣಲತ ದಂಪತಿಗಳಿಗೆ ಜನಿಸಿದ ಶ್ರೀಲೀಲಾ ಅವರಿಗೆ ಇಬ್ಬರು ಅಣ್ಣಂದಿರು ಇದ್ದಾರೆ. == ವೃತ್ತಿಜೀವನ == ಹೊಸನಟ ವಿರಾಟ್ ಜೊತೆಗೆ ಅಭಿನಯಿಸಿದ ಕಿಸ್ ಚಿತ್ರವೇ ಲೀಲಾ ಅವರ ಮೊದಲ ಚಿತ್ರ. ಅರ್ಜುನ್ ನಿರ್ದೇಶಿಸಿದ ಈ ಚಿತ್ರ ಯಶಸ್ಸನ್ನು ಗಳಿಸಿತು. ತಮ್ಮ ಮೊದಲ ಚಿತ್ರದ ಬಿಡುಗಡೆಗೂ ಮೊದಲೇ, ನಟ ಶ್ರೀಮುರಳಿ ಜೊತೆಗೆ ಭರಾಟೆ ಚಿತ್ರಕ್ಕೆ ನಾಯಕಿಯಾಗಿ ಲೀಲಾ ಆಯ್ಕೆಯಾದರು. ಅವರ ಎರಡೂ ಚಿತ್ರಗಳು ಗೆಲುವು ಸಾಧಿಸಿವೆ. == ಚಿತ್ರಗಳು == == ಉಲ್ಲೇಖಗಳು ==